ಕುನ್ನಾಳ ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
Sports School Chandargi ಯಲ್ಲಿ ನಡೆದ ರಾಮದುರ್ಗ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಿಎಂಶ್ರೀ ಸರಕಾರಿ ಶಾಲೆ ಕುನ್ನಾಳ ಶಾಲೆಯ ಕು. ಅಲ್ಪಿಯಾ ನಾಯ್ಕ 200 ಮೀಟರ್ ಓಟದಲ್ಲಿ ಪ್ರಥಮ ಹಾಗೂ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಕು. ಭಾಗ್ಯಾ ಅಲಕನ್ನವರ 600 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ರೀಲೆ ಸ್ಪರ್ಧೆಯಲ್ಲಿ ಕು. ಅಲ್ಪಿಯಾ ನಾಯ್ಕ, ಭ್ಯಾಗ್ಯಾ ಅಲಕನ್ನವರ, ಸರಸ್ವತಿ ಜಟ್ಟನವರ ಹಾಗೂ ಅಪ್ಸಾನಾ ತಹಶಿಲ್ದಾರ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
8ನೇ ತರಗತಿಯ ಸೌಭಾಗ್ಯಾ ಹುದ್ದಾರ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಕು. ಅಪ್ಸಾನಾ ತಹಶಿಲ್ದಾರ 200 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಳು.
ಬಾಲಕಿಯರ ಖೋಖೋ ಸ್ಪರ್ಧೆಯಲ್ಲಿ ಉತ್ತಮ ಹೋರಾಟ ದ ನಡುವೆಯೂ ಆನೆಗುದ್ದಿ ಸರಕಾರಿ ಶಾಲೆಯ ಬಾಲಕಿಯರ ಶ್ರೇಷ್ಠ ಆಟದಿಂದ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು. ಬಾಲಕರ ವಾಲಿಬಾಲ್ ನಲ್ಲಿ ಕೂಡ ನಮ್ಮ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಆಟದ ಮೂಲಕ ಗಮನ ಸೆಳೆದರು.
ಶ್ರೇಷ್ಠ ಪ್ರಯತ್ನಗಳು ಉತ್ತಮ ಫಲವನ್ನೇ ನೀಡುತ್ತವೆ, ಭಾಗವಹಿಸುವ ಮೂಲಕ ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸುವಲ್ಲಿ ಕ್ರೀಡಾಕೂಟಗಳು ಸಹಕಾರಿ. ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಗೆ ಶಾಲೆಯ ಪ್ರಧಾನ ಗುರುಗಳು, ಶಿಕ್ಷಕ ವೃಂದ, ಎಸ್.ಡಿ.ಎಮ್.ಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರ ಪರವಾಗಿ ಹೃದಯಪೂರ್ವಕ ಅಭಿನಂದನೆಗಳು.
#ProudChamps #Congratulations
Comments
Post a Comment