ಸಮುದಾಯವೇ ಸರಕಾರಿ ಶಾಲೆಗಳ ಶಕ್ತಿ

ಶಿಕ್ಷಕನಾಗಿ ಆರಂಭಿಕ ದಿನಗಳವು, ಮಕ್ಕಳಲ್ಲಿ ಆಂಗ್ಲ‌ ಭಾಷಾ ಕಲಿಕಾ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ  ವಿವಿಧ ಚಟುವಟಿಕೆಗಳು ಹಾಗೂ ಸ್ಪರ್ಧೆಗಳನ್ನು ತರಗತಿಗಳಲ್ಲಿ ಪರಿಚಯಿಸಿದೆ. Antonyms, Synonyms, Suffixes, Prefixes, Singular & Plural, Homophones, Homonyms, Parts of Speech ಹೀಗೆ ಎಲ್ಲವುಗಳೂ ಚಟುವಟಿಕೆಗಳಾಗಿ ಬದಲಾಗಿದ್ದವು. ರಿವರ್ಸ ನಂಬರ್ಸ, ಅಲ್ಪಾಬೆಟ್ಸ, ಯೂಸೇಜ್ ಆಪ್ ಮಲ್ಟಿ ಲಾಂಗ್ವೇಜ್ ಫಾರ್ ನಂಬರ್ಸ, ವರ್ಡ್ಸ ಅ್ಯಂಡ್ ಇಟಿಸಿ... ಹೀಗೆ ಎಲ್ಲ ಪ್ರಯೋಗಗಳನ್ನು ಮಾಡಿ ಮಕ್ಕಳ ಇಂಗ್ಲಿಷ್ ಒಂದು ಹಂತಕ್ಕೆ ಬಂತು.

ವಿಷಯಗಳನ್ನು ಕಲಿತರು ಎಂಬ ಸಮಾದಾನ ನನ್ನದಾದರೂ ಮಾರನೇ ದಿನ ತರಗತಿಗೆ ಹೋದಾಗ‌ ಮಕ್ಕಳು "ಸರ್ರಿ, ಅದ ನಮಗ ಗೊತ್ತೈತ್ರಿ, ಮತ್ತೇನಾರ ಹೊಸಾದ ಕಾಂಪಿಟೇಶನ್ ಮಾಡ್ರಿ" ಅಂತ ಅಂದಾಗ ನನಗನಿಸಿದ್ದು, ನಾವು ಎಷ್ಟೆಲ್ಲಾ ಮಾಡಿದೆ ಎಂದುಕೊಂಡಾಗಲೂ ಮಕ್ಕಳಿಗೆ ಅದು ಬರೀ ಇಷ್ಟೇ ಅನ್ನೋ ಸತ್ಯ.

ಮಕ್ಕಳು ನಿತ್ಯವೂ ಹೊಸತನವನ್ನು ಬಯಸುತ್ತಾರೆ, ನಿನ್ನೆಯದನ್ನು ಅವರಿಂದು ಒಪ್ಪುವುದಿಲ್ಲ, ಒಪ್ಪಿದರೂ ಇಷ್ಟದಿಂದಲ್ಲ, ಕಷ್ಟದಿಂದ ಎನ್ನುವುದು ಕೂಡ ಸ್ಪಷ್ಟ. ಹೀಗೆ ಹುಡುಕುತ್ತಾ, ನಿತ್ಯವೂ ಹೊಸತನ್ನು ಕೊಡುತ್ತಾ ಸಾಗಿದ್ದರ ಫಲವೇ ಪಿಎಂಶ್ರೀ ಸರಕಾರಿ ಶಾಲೆ ಕುನ್ನಾಳ . ಎಲ್ಲ ಶಿಕ್ಷಕರು ಜಾಲತಾಗಳಲ್ಲಿ ಹುಡುಕಾಡಿ ಹೊಸತನ್ನು ತರಲೇಬೇಕು. ಸರ್ರಿ ನಿನ್ನೆ ಆರನೇತ್ತೆದವರಿಗೆ ಮರಗಾಲ ಸರ್ ಮಾಡ್ಸಿದಾರಂತ ಹಂಗ ನಮಗೂ ಮಾಡಸ್ರಿ ಅಂತ ಕೇಳೋ‌ ಮಕ್ಕಳ ಕುತೂಹಲವೇ ನಮ್ಮನ್ನು ಹೊಸತನ್ನು ಹುಡುಕುವಂತೆ, ಕಲಿಯುವಂತೆ ಮಾಡುತ್ತದೆ. ಇಂದು ಎಲ್ಲರೂ ಹುಡುಕುತ್ತೇವೆ, ನಾಳೆಯ ತರಗತಿಗೆ ಹೊಸತನ್ನು‌ ಮಕ್ಕಳಿಗೆ ನೀಡುವ ತುಡಿತದಿಂದ, ಜೊತೆಗೆ ನಾವೂ ಕಲಿಯುತ್ತೇವೆ.

ಬಹುಶಃ ಹಳೆಯ ವಿದ್ಯಾರ್ಥಿಗಳು, ಸಮುದಾಯ ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳು‌ ಲಬ್ಯವಾಗದೇ ಹೋಗಿದ್ದರೆ ಮಕ್ಕಳ‌ ಮುಂದೆ ನಿತ್ಯವೂ ಹೊಸತನ್ನು ಹೊತ್ತು ಹೋಗುವುದು ಕಷ್ಟವಾಗುತ್ತಿತ್ತೇನೋ... ಆದರೆ ತಂತ್ರಜ್ಞಾನ ಮಕ್ಕಳ ಕಲಿಕಾ ಹಸಿವನ್ನು, ಕುತೂಹಲವನ್ನು ನೀಗಿಸುವಲ್ಲಿ ಯಶಸ್ವಿಯಾಗಿದೆ ಅನ್ನೋದು ತುಂಬಾ ಸ್ಪಷ್ಟ. 

ಕಲಿಕೆ ಫಲಪ್ರದವಾಗಲು ಮಕ್ಕಳಿಗೆ ನಾವು ನಿತ್ಯವೂ ಹೊಸತನ್ನು ಕೊಂಡೊಯ್ಯಲೇಬೇಕು, ಇಂದಿನ ಕಾಲಘಟ್ಟದ ಮಕ್ಕಳಿಗೆ ಅದು ಅನಿವಾರ್ಯವೂ ಕೂಡ. ಈ ನಿಟ್ಟಿನಲ್ಲಿ ಎಲ್ಲ ಸರಕಾರಿ ಶಾಲೆಗಳ ಹಳೆಯ ವಿದ್ಯಾರ್ಥಿಗಳು ಹಾಗೂ ಸಮುದಾಯ ಸಮನ್ವಯತೆ ಸಾಧಿಸಿ ತಮ್ಮೂರ ಶಾಲೆಗಳಲ್ಲೂ ಆಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಮಕ್ಕಳಿಗೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಅವಶ್ಯಕತೆ ಇದೆ. #ನಮ್ಮಶಾಲೆನಮ್ಮಜವಾಬ್ದಾರಿ ಎನ್ನುವ ಸರಕಾರದ ಯೋಜನೆಯ ಆಶಯವೂ ಅದೇ ಆಗಿದೆ. 

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ‌ಮಕ್ಕಳಿಗೆ ಎಲ್ಲ ಅವಕಾಶಗಳನ್ನು ಒದಗಿಸುವುದಕ್ಕಾಗಿ ಸಮುದಾಯದ ಸಹಭಾಗಿತ್ವ ಸರಕಾರಿ ಶಾಲೆಗಳಿಗಿದೆ. ಅದರಲ್ಲೂ ಕಳೆದ ಒಂದು ವರ್ಷದಲ್ಲಿ ಬಹುತೇಕ ಸರಕಾರಿ ಶಾಲೆಗಳನ್ನು ಹಳೆಯ ವಿದ್ಯಾರ್ಥಿಗಳು ಹಾಗೂ ಸಮುದಾಯದವರು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವುದು ಸಕಾರಾತ್ಮಕ ಬೆಳವಣಿಗೆ. ಎಲ್ಲ ಸರಕಾರಿ ಶಾಲೆಗಳು ಅಭಿವೃದ್ಧಿಯಾಗಲಿ, ಎಲ್ಲ ಮಕ್ಕಳಿಗೂ ಗುಣಾತ್ಮಕ ಸಿಗಲಿ.

#chasingdreams #ShapingFutures #ನಮ್ಮಶಾಲೆನಮ್ಮಹೆಮ್ಮೆ #ನಮ್ಮಶಾಲೆನಮ್ಮಜವಾಬ್ದಾರಿ #ಬದಲಾಗೋಣ #ಬದಲಿಸೋಣ

Comments

Popular posts from this blog

ವಿಜ್ಞಾ‌ನ ವಸ್ತು ಪ್ರದರ್ಶನ

ಕುನ್ನಾಳ ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ