ನನಗೆ ಸ್ಪೂರ್ತಿ ನೀಡಿದ ನನ್ನವಳ ನಡೆ
-:ನನಗೆ ಸ್ಪೂರ್ತಿ ನೀಡಿದ ನನ್ನವಳ ನಡೆ:-
ಇಂದು ನನ್ನವಳ ಹುಟ್ಟು ಹಬ್ಬ. ಪ್ರತೀ ವರ್ಷದಂತೆ ಮಡದಿಯ ಖುಷಿಗಾಗಿ ಏನಾದರೂ ಮಾಡೋನ ಎಂಬ ಆಲೋಚನೆಯಲ್ಲಿ ಅವಳಿಗೆ ಶುಭಾಶಯ ಕೋರಿ, ಹಲವು ಯೋಜನೆಗಳನ್ನು ಅವಳ ಮುಂದಿಟ್ಟೆ.. ಸುಮ್ಮನಾದಳು!
ನನ್ನ ಹುಟ್ಟು ಹಬ್ಬಕ್ಕೆ ಅಂದಾಜು ಎಷ್ಟು ವ್ಯಯಿಸಬೇಕೆಂದಿರುವೆ ಎಂದು ಸ್ವಲ್ಪ ಸಮಯದ ನಂತರ ಕೇಳಿದಳು. ನಾನು 1000 ದಿಂದ 1500 ಗಳು ಎಂದು ಉತ್ತರಿಸಿದೆ. 1000 ರೂಪಾಯಿಗಳನ್ನು ಅವಳ ಖಾತೆಗೆ ವರ್ಗಾಯಿಸಲು ತಿಳಿಸಿದಳು. ಅವಳ ಖಾತೆಗೆ ವರ್ಗಾಯಿಸಿದೆ.
ಪ್ರತಿ ದಿನವೂ ನನ್ನ ಶಾಲೆಯ, ನನ್ನ ಚಟುವಟಿಕೆಗಳ ಬಗ್ಗೆ, ದಾನಿಗಳೊಂದಿಗೆ ಮಾತನಾಡುವುದನ್ನು ಸನೀಹದಿದ್ದ ಗಮನಿಸಿದ್ದ ಅವಳ ತಲೆಯಲ್ಲೊಂದು ಹೋಸ ಆಲೋಚನೆ ಬಂದಿತ್ತು.
ಆ ಆಲೋಚನೆಯೇ, ಹುಟ್ಟು ಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಸರಕಾರಿ ಶಾಲೆಯ ಅಭಿವೃದ್ಧಿಗೆ ಸಂಧಾಯ ಮಾಡುವುದಾಗಿತ್ತು. ನನ್ನ ಮೊಬೈಲಿನಲ್ಲಿ ನಮ್ಮ ಶಾಲೆಯ ದೇಣಿಗೆ ಖಾತೆಯ ಮಾಹಿತಿಯನ್ನು ಪಡೆದು, ರೂ. 1000 ಗಳನ್ನು ವರ್ಗಾಯಿಸಿ, ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ಕಲಿಕಾ ಸಂಪನ್ಮೂಲಗಳಿಗೆ ಬಳಸುವಂತೆ ತಿಳಿಸಿದಾಗ ನಿಜಕ್ಕೂ ಅವಳ ಹುಟ್ಟು ಹಬ್ಬದ ದಿನದಂದು ಅವಳು ನನಗೆ ಸ್ಪೂರ್ತಿಯಾದಳು. ಅವಳಿಗೊಂದು ದೊಡ್ಡ ಸಲಾಮ್.
ನಿಜಕ್ಕೂ ಸರಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಇಂತಹ ಅಲೋಚನೆ ಮಾಡುವ ಮನಸುಗಳ ಅವಶ್ಯಕತೆಯಿದೆ ಎಂದೆನಿಸಿತು. ಹುಟ್ಟು ಹಬ್ಬಗಳಿಗಾಗಿ ದುಂದು ವೆಚ್ಚ ಮಾಡುವ ಈ ದಿನಗಳಲ್ಲಿ, ಅದೇ ಹಣ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಬಳಕೆಯಾಗಲಿ ಎನ್ನುವ ಅವಳ ಆಭಿಲಾಷೆ ನಿಜಕ್ಕೂ ಇಂದಿನ ಅವಶ್ಯಕತೆ ಎನಿಸಿತು. ನೀಡಿರುವ ಹಣ ಕಡಿಮೆ ಎನಿಸಿದರೂ, ಹನಿ ಹನಿ ಕೂಡಿದರೆ ಹಳ್ಳ ಎಂಬ ಗಾದೆ ಮನದಲಿ ಮೂಡಿ ಸುಮ್ಮನಾದೆ.
ಎಲ್ಲವನ್ನೂ ಪೇಸಬುಕ್ ಗೋಡೆಯ ಮೇಲೆ ಬರೆಯುವ ಗೀಳಿರುವ ನನಗೆ ಇದನ್ನೇಕೆ ಬರೆಯಬಾರದು, ತನ್ಮೂಲಕ ಅವಳಿಗೊಂದು ಹುಟ್ಟು ಹಬ್ಬದ ಶುಭಾಶಯ ಕೋರಬಾರದೆನಿಸಿತು.
Happy Birthday dear and Thanks for supporting Govt School.
#ಬದಲಾಗೋಣ_ಬದಲಾಯಿಸೋಣ
#Empowering_Govt_Schools
#Support_Govt_Schools
<script async src="https://pagead2.googlesyndication.com/pagead/js/adsbygoogle.js?client=ca-pub-1539750355291568"
crossorigin="anonymous"></script>
Comments
Post a Comment