ವಿಜ್ಞಾನ ವಸ್ತು ಪ್ರದರ್ಶನ
*ಕುನ್ನಾಳ ಪಿಎಂಶ್ರೀ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ* ರಾಮದುರ್ಗ: ತಾಲೂಕಿನ ಕುನ್ನಾಳ ಗ್ರಾಮದ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಎಸ್.ಡಿ.ಎಮ್.ಸಿ ಅಧ್ಯಕ್ಷ ಸತೀಶ ಮಳಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ವಿವಿಧ ಶಾಲೆಗಳ 30 ಕ್ಕೂ ಹೆಚ್ಚು ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಪ್ರಥಮ ಸ್ಥಾನವನ್ನು ಎಮ್.ಕೆ.ಬಿ.ಎಸ್ ಸಾಲಹಳ್ಳಿ, ದ್ವಿತೀಯ ಸ್ಥಾನವನ್ನು ಕೆ.ಹೆಚ್.ಪಿ.ಎಸ್ ಹಿರೇಕೊಪ್ಪ ಕೆ ಎಸ್, ತೃತೀಯ ಸ್ಥಾನವನ್ನು ಕೆ.ಹೆಚ್.ಪಿ.ಎಸ್ ಗುದಗೊಪ್ಪ ಹಾಗೂ ಚತುರ್ಥ ಸ್ಥಾನವನ್ನು ಎಮ್.ಪಿ.ಎಸ್ ಹುಲಕುಂದ ಶಾಲೆಯ ವಿದ್ಯಾರ್ಥಿಗಳು ಪಡೆಯುವ ಮೂಲಕ ಗಮನ ಸೆಳೆದರು. ಹುಲಕುಂದ ಸಮೂಹ ಸಂಪನ್ಮೂಲ ವ್ಯಕ್ತಿ ವಿ ಡಿ ದಳವಾಯಿ, ಹಿರೇಕೊಪ್ಪ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ ಜೇವೂರ, ವಿ ಆರ್ ಅಣ್ಣಿಗೇರಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಪಿಎಂಶ್ರೀ ಸರಕಾರಿ ಶಾಲೆ ಕುನ್ನಾಳದ ವಿದ್ಯಾರ್ಥಿಗಳು ಹಲವಾರು ಮಾದರಿಗಳ ಮೂಲಕ ಪ್ರದರ್ಶನದಲ್ಲಿ ಭಾಗವಹಿಸಿ ಮೆರಗು ಹೆಚ್ಚಿಸಿದರು. ಇತರ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸದರಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರಶಸ್ತಿ ಸುತ್ತಿಗೆ ಪರಿಗಣಿ...
Comments
Post a Comment