ಕುನ್ನಾಳ ಸರಕಾರಿ ಶಾಲೆಗೆ ಜಿಲ್ಲಾ ಪಂಚಾಯತಿ‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಬೇಟಿ

ಬೆಳಗಾವಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ದರ್ಶನ ಹೆಚ್ ವಿ ಸರ್ ಇಂದು ನಮ್ಮೂರ ಸರಕಾರಿ ಶಾಲೆ ಕುನ್ನಾಳ ಗೆ ನರೇಗಾ ಕಾಮಗಾರಿಗಳನ್ನು‌ ಪರಿಶೀಲಿಸಿದರು.

ಇತ್ತೀಚಿಗೆ  #universenanoinnovativelab ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿನಂತಿಸಿದಾಗ ಮುಂದಿನ ರಾಮದುರ್ಗ ತಾಲೂಕು ಬೇಟಿ ಸಂದರ್ಭದಲ್ಲಿ ಶಾಲೆಗೆ ಬೇಟಿ ನೀಡುವ ಭರವಸೆ ನೀಡಿದ್ದ‌ ಮಾನ್ಯರು ಇಂದು ಬೇಟಿ‌ ನೀಡಿ ದಾನಿಗಳ ಸಹಾಯದಿಂದ ನಿರ್ಮಿಸಿರುವ ಗೂಗಲ್ ಡಿಜಿಲ್ಯಾಬ್, ಯುನಿವರ್ಸ ನ್ಯಾನೋ ಇನ್ನೋವೇಟಿವ್ ಲ್ಯಾಬ್, ಜ್ಞಾನ ದೀವಿಗೆ ಗ್ರಂಥಾಲಯ, ನಲಿ‌ ಕಲಿ ತರಗತಿಗಳು, ಶಾಲಾ ವರ್ಗಕೋಣೆಗಳನ್ನು ವೀಕ್ಷಿಸಿ ಮೂಲಭೂತ ಸೌಕರ್ಯಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಗೂಗಲ್ ಡಿಜಿಲ್ಯಾಬ್ ನಲ್ಲಿ ಮಾನ್ಯರು ಖುದ್ದು ಟೈಪಿಂಗ್ ಮಢುವ ಮೂಲಕ ಮಕ್ಕಳಿಗೆ ಟೈಪಿಂಗ್ ಬಗ್ಗೆ ಮಾಹಿತಿ ನೀಡಿದ್ದು ವಿಶೇಷವಾಗಿತ್ತು. ನಲಿ‌ಕಲಿ ತರಗತಿಗಳಲ್ಲಿ ಚಿಣ್ಣರೊಂದಿಗೆ ಸ್ವಲ್ಪ ಸಮಯ ಕಳೆದು ಶಾಲೆಯ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವ ಭರವಸೆಯನ್ನು ನೀಡಿದರು. ತಮ್ಮ ಅಗತ್ಯ ಸಲಹೆ, ಮಾರ್ಗದರ್ಶನ‌ ಹಾಗೂ ಅಮೂಲ್ಯ ಸಮಯಕ್ಕಾಗಿ ಧನ್ಯವಾದಗಳು ಸರ್..

ಈ ಸಂದರ್ಭದಲ್ಲಿ ರಾಮದುರ್ಗ ತಾಲೂಕ ಪಂಚಾಯತಿಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ Praveen Sali ಸರ್ , ಇತರ ಅಧಿಕಾರಿಗಳು, ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

#belagavizillapanchayat #EOTPRamdurg #ghpskunnal #Mgnrega #GovtSchools #

ನರೇಗಾ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ

ಗೂಗಲ್ ಡಿಜಿಲ್ಯಾಬನಲ್ಲಿ ಮಕ್ಕಳಿಗೆ ಟೈಪಿಂಗ್ ಬಗ್ಗೆ ಮಾಹಿತಿ ನೀಡಿದ ಮಾನ್ಯ ಶ್ರೀ ದರ್ಶನ್ ಹೆಚ್ ವಿ ಸರ್..

Comments

Popular posts from this blog

ವಿಜ್ಞಾ‌ನ ವಸ್ತು ಪ್ರದರ್ಶನ

ಕುನ್ನಾಳ ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಮುದಾಯವೇ ಸರಕಾರಿ ಶಾಲೆಗಳ ಶಕ್ತಿ