ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
ಮಕ್ಕಳಿಗೆ ಒತ್ತಡ ರಹಿತ ಕಲಿಕೆ ಸಿಗಲಿ: ತುಂಗಾತಾಯಿ ಮಳಲಿ
ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಅಘಾದವಾದ ಒತ್ತಡವನ್ನು ಹೇರಲಾಗುತ್ತಿದ್ದು, ಮಕಳಿಗೆ ಒತ್ತಡ ರಹಿತ ಸಂತಸಮಯ ಕಲಿಕೆಯನ್ನು ಉತ್ತೇಜಿಸಬೇಕಾಗಿದೆ ಎಂದು ತುಂಗಾತಾಯಿ ಮಳಲಿ ಹೇಳಿದರು.
ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೈನಿಕರಾದ ದಿ. ತಿಮ್ಮಣ್ಣ ಮಳಲಿ ಸ್ಮರಣಾರ್ಥ 5 ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ನನ್ನ ಪತಿ ಇದೇ ಶಾಲೆಯಲ್ಲಿ ಕಲಿತು ಸೈನಿಕರಾಗಿ ದೇಶ ಸೇವೆ ಮಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರ ಭವಿಷ್ಯ ರೂಪಿಸಿದರು. ಅವರ ಹೆಸರಿನಲ್ಲಿ ಅವರ ಕಲಿತ ಶಾಲೆಯ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ನಮ್ಮ ಸಹಕಾರ ಪ್ರತೀ ವರ್ಷವೂ ಮುಂದುವರೆಯಲಿದೆ. ಈ ಸಾಲಿನಲ್ಲಿ ಹೈಟೆಕ್ ನಲಿಕಲಿ ತರಗತಿಗಳ ನಿರ್ಮಾಣಕ್ಕೆ ಅಗತ್ಯ ಆರ್ಥಿಕ ಸಹಕಾರ ನೀಡುವ ಭರವಸೆ ನೀಡಿದರು. 5 ನೇ ತರಗತಿಯ 40 ವಿದ್ಯಾರ್ಥಿಗಳಿಗೆ ನವೋದಯ,ಮೊರಾರ್ಜಿ ಪರೀಕ್ಷೆ ಪುಸ್ತಕ, ಕಂಪಾಸ್, ಇಂಗ್ಲೀಷ್ ಡಿಕ್ಷನರಿ ಹಾಗೂ ನೋಟಬುಕ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಅನೀಲ ಮಳಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಗೀತಾ ಹೂಗಾರ, ಉಪಾಧ್ಯಕ್ಷರಾದ ಸೈದುಸಾಬ ನಧಾಪ, ಸದಸ್ಯರಾದ ಮಂಜುಳಾ ಬಿ.ಪಾಟೀಲ, ದಾವಲಬಿ ನಾಯ್ಕ ಪ್ರಧಾನ ಗುರುಗಳಾದ ಬಿ ಬಿ ಹಾಲೊಳ್ಳಿ, ಎಸ್ ಎ ಕಳ್ಳಿ, ವಾಯ್ ಟಿ ಬಾರ್ಕಿ, ಕೆ ಬಿ ಮಾಳಪ್ಪನವರ, ವಿ ಆರ್ ಅಣ್ಣಿಗೇರಿ, ಅಶ್ವಿನಿ ಟಿ ಉಪಸ್ಥಿತರಿದ್ದರು. ಶಿಕ್ಷಕರಾದ ಎಪ್ ಎನ್ ಕುರಬೇಟ ಸ್ವಾಗತಿಸಿದರು, ಉಮೇಶ್ವರ ಮರಗಾಲ ವಂದಿಸಿದರು.
Comments
Post a Comment