ಹೊಗಳಿಕೆ, ತೆಗಳಿಕೆ ಮತ್ತು ಅಹಂ



ವಾರದ ಹಿಂದೆ ಶಿಕ್ಷಕ‌ ಮಿತ್ರನೋರ್ವನ ಜೊತೆ ಮಾತನಾಡುತ್ತಿದ್ದೆ, ಈರ್ವರ ನಡುವಿನ ಸಂಭಾಷಣೆ ಪ್ರತಿ ಸಲವೂ ವೃತ್ತಿಪರ ಹಾಗೂ ವಯಕ್ತಿಕ ಬೆಳವಣಿಗೆಗೆ ಪೂರಕವಾದುದೇ ಆಗಿರುತ್ತದೆ. ಸುಮಾರು 15 ನಿಮಿಷಗಳ ಆ ಮಾತುಕತೆಯಲ್ಲಿ  ಅವರ ಮನದೊಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ‌ ಮಾಡಿದೆ..

"ಕೆಲಸ ಮಾಡುವಾಗ ಹೊಗಳಿಕೆಯನ್ನು ನಿರೀಕ್ಷಿಸಬಾರದು, ತೆಗಳಿಕೆಯನ್ನು ತಿರಸ್ಕರಿಸಲೂಬಾರದು. ಏಕೆಂದರೆ ಕೆಲವೊಮ್ಮೆ ಹೊಗಳಿಕೆ ನಮ್ಮನ್ನು ದಾರಿ ತಪ್ಪಿಸಿ "ಅಹಂ" ಬೆಳೆಸಬಹುದು, ಇನ್ನೂ ಕೆಲವು ಸಂದರ್ಭಗಳಲ್ಲಿ ತೆಗಳಿಕೆ ನಮ್ಮ ನ್ಯೂನತೆಗಳನ್ನು ಸರಿಪಡಿಸಿ ನಮ್ಮ ಕಾರ್ಯವನ್ನು ಪರಿಪೂರ್ಣವಾಗಿಸಬಹುದು. ನಮ್ಮ ವ್ಯಕ್ತಿತ್ವಕ್ಕೆ ಮೆರಗು ಬರಲು ಹೊಗಳಿಕೆ ಹಾಗೂ ತೆಗಳಿಕೆಗಳೆರಡೂ ಇರಬೇಕು. ಎರಡನ್ನೂ ಸ್ವೀಕರಿಸುವ ರೀತಿ ಮಾತ್ರ ನಮ್ಮ ಉನ್ನತಿ ಹಾಗೂ ಅವನತಿಯನ್ನು ನಿರ್ಧರಿಸುತ್ತದೆ" 👍👍

ಕಾರಣವಿಷ್ಟೇ....

ಎಲ್ಲರೂ ಎಲ್ಲರಿಗೂ ಇಷ್ಟವಾಗಲು ಸಾಧ್ಯವಿಲ್ಲ, ಹಾಗೆಯೇ ಎಲ್ಲ ವಿಚಾರಗಳು, ಆಲೋಚನೆಗಳು ಕೂಡ..

ನಮಗಿಷ್ಟ ಎಂದು ಅದು ಸರ್ವಸಮ್ಮತವಲ್ಲ, ನಮಗಿಷ್ಟವಲ್ಲ ಎಂಬ ಮಾತ್ರಕ್ಕೆ ಎಲ್ಲರೂ ವಿರೋದಿಸುತ್ತಾರೆಂದೂ ಅಲ್ಲ.

ಒಪ್ಪಿಕೊಳ್ಳುವವರು, ವಿರೋಧಿಸುವವರು ಎಲ್ಲ ಕಡೆ ಇದ್ದೇ ಇರುತ್ತಾರೆ, ಇರಬೇಕು ಕೂಡ....

ಯಾರಿಗೂ "ಅಹಂ" ಬಾರದಿರಲಿ ಎಂದು.🥰🤩

Comments

Popular posts from this blog

ವಿಜ್ಞಾ‌ನ ವಸ್ತು ಪ್ರದರ್ಶನ

ಕುನ್ನಾಳ ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಮುದಾಯವೇ ಸರಕಾರಿ ಶಾಲೆಗಳ ಶಕ್ತಿ