ಜಿಪಿಟಿ ಬುನಾದಿ ತರಬೇತಿ, ಬೈಲಹೊಂಗಲ
ಶಾಸಕರ ಮಾದರಿ ಸರಕಾರಿ ಶಾಲೆ, ಬೈಲಹೊಂಗಲದಲ್ಲಿ ನೂತನವಾಗಿ ನೇಮಕ ಹೊಂದಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಬುನಾದಿ ತರಬೇತಿಯಲ್ಲಿ ಪಿಎಂಶ್ರೀ ಸರಕಾರಿ ಶಾಲೆ ಕುನ್ನಾಳ ದ ಯಶೋಗಾಥೆ, ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಹಾಗೂ ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯದ ಪಾತ್ರದ ಕುರಿತು ಮಾತನಾಡಿದೆ.
ನೋಡಲ್ ಅಧಿಕಾರಿಗಳು ನೀಡಿದ್ದ ಸಮಯ 45 ನಿಮಿಷ ಆದರೆ ಅರಿವಿಗೆ ಬಾರದಂತೆ ತೆಗೆದುಕೊಂಡ ಸಮಯ 2 ಗಂಟೆ 30 ನಿಮಿಷ. ಶಿಕ್ಷಕರ ಮನಸ್ಥಿತಿಯನ್ನಾಧರಿಸಿ ಮುಂದುವರೆಯುವ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಮಾತನ್ನಾರಂಭಿಸಿದ್ದ ನನಗೆ ಅಧಿವೇಶನದ ಉದ್ದಕ್ಕೂ ಶಿಕ್ಷಕರ ಕಲಿಯುವ ಹಸಿವು, ಆಸಕ್ತಿ ಮತ್ತು ಕುತೂಹಲವನ್ನು ನೋಡಿ ನಾನು ಹೇಳಿದ್ದೇ ಕಡಿಮೆ ಎನಿಸಿದ ಭಾವ.
ಭವಿಷ್ಯದಲ್ಲಿ ಸರಕಾರಿ ಸರಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಹಲವು ಕನಸುಗಳನ್ನು ಹೊತ್ತು ಶಿಕ್ಷಕ ವೃತ್ತಿಯನ್ನು ಆರಂಭಿಸಿರುವ ಅವರ ಕಣ್ಣುಗಳಲ್ಲಿ ಭವಿಷ್ಯದಲ್ಲಿ ಸರಕಾರಿ ಶಾಲೆಗಳನ್ನು ಬದಲಿಸಬಲ್ಲ ಭರವಸೆಯಂತೂ ಸಿಕ್ಕಿತು. ಅದು ಸಶಕ್ತ ಆಲೋಚನೆಗಳ, ಪ್ರಬುದ್ಧ ಮನಸ್ಸುಗಳ ಕ್ರಿಯಾಶೀಲ ಶಿಕ್ಷಕರ ತಂಡ, ಸುಮ್ಮನೆ ಕೇಳುವವರು ಸಾದನೆಯತ್ತ ಗಟ್ಟಿ ಹೆಜ್ಜೆಗಳನ್ನಿಡಬಲ್ಲರು. ಅವರೊಂದಿಗೆ ಮತ್ತಷ್ಟು ಮಾತನಾಡಬೇಕೆನಿಸಿದರೂ ಸಮಯ ಅನೂಕೂಲಿಸಲಿಲ್ಲ. ಅವರಿಗೆ ಪ್ರೇರಣೆಯಾದೆ ಎಂದರೆ ತಪ್ಪಾದೀತು, ನನ್ನ ಆಶಾವಾದವನ್ನು, ನಾಳೆಯ ಬಗೆಗಿನ ಭರವಸೆಯನ್ನು, ನನ್ನ ಭವಿಷ್ಯದ ವೃತ್ತಿ ಬದುಕಿಗೆ ಒಂದಿಷ್ಟೂ ಹೊಸ ಹುಮ್ಮಸ್ಸನ್ನು ನೀಡಿದರು.
ಸಾರ್ಥಕ ವೃತ್ತಿಯ ಪರಮೋಚ್ಚ ಸಾಧನೆಗಳ ಮೆರಗು ಇವರಿಗೆಲ್ಲ ಸಿಗಲಿ, ಶಿಕ್ಷಕ ವೃತ್ತಿಯ ಹೆಮ್ಮೆಯ ಅನುಭೂತಿ ಸಿಗಲಿ, ಬದುಕಿಗೆ ಭದ್ರತೆ ನೀಡಿರುವ ವೃತ್ತಿಯಿಂದ ಮಕ್ಕಳ ಭವಿಷ್ಯ ಬದಲಿಸುವ ಮೂಲಕ ಸಾರ್ಥಕ ವೃತ್ತಿ ಜೀವನದ ಕನಸುಗಳು ನನಸಾಗಲಿ.
ಅನುಭವ ಹಂಚಿಕೊಳ್ಳುವ ಅವಕಾಶ ನೀಡಿ, ಮತ್ತಷ್ಟು ಯುವ ಶಿಕ್ಷಕರ ಆಲೋಚನೆಗಳನ್ನರಿಯುವಂತೆ ಮಾಡಿದ ತರಬೇತಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಭಾರತಿ ದಾಸೋಗ ಮ್ಯಾಮ್ ಹಾಗೂ ತರಬೇತಿಯ ಸಂಪನ್ಮೂಲ ಶಿಕ್ಷಕರಿಗೆ ಧನ್ಯವಾದಗಳು.
#InductionTraining #GPT #Bailhongal
#ChasingDreams #ShapingFutures #ನಾವಿದ್ದಂತೆಬದುಕು
Comments
Post a Comment