ಕುನ್ನಾಳ ಪಿಎಂಶ್ರೀ ಶಾಲೆಗೆ ರಾಯಬಾಗ ತಾಲೂಕಿನ‌ ಶಿಕ್ಷಕರ ನಿಯೋಗ ಭೇಟಿ

ಕುನ್ನಾಳ ಪಿಎಂಶ್ರೀ ಶಾಲೆಗೆ ರಾಯಬಾಗ ತಾಲೂಕಿನ ಶಿಕ್ಷಕರ ನಿಯೋಗ ಭೇಟಿ

ರಾಮದುರ್ಗ: ಪಠ್ಯ, ಪಠ್ಯೇತರ ಚಟುವಟಿಕೆಗಳು ಹಾಗೂ ಕ್ರೀಡೆಗಳಲ್ಲಿ ಸಮಗ್ರ ವಿಕಾಸ ಹೊಂದುವ ಮೂಲಕ ಕೇಂದ್ರ ಸರಕಾರದ ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿ ಅತ್ಯಂತ ಪರಿಣಾಮಕಾರಿಯಾಗಿ ಯೋಜನೆ ಜಾರಿ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಮೂಲಕ ಮಾದರಿಯಾಗಿರುವ ತಾಲೂಕಿನ ಕುನ್ನಾಳ ಗ್ರಾಮದ ಪಿಎಂಶ್ರೀ ಸರಕಾರಿ ಶಾಲೆಗೆ ರಾಯಬಾಗ ತಾಲೂಕಿನ ಶಿಕ್ಷಕರ ನಿಯೋಗ ಬೇಟಿ ನೀಡಿ ಮಾಹಿತಿ ಪಡೆಯಿತು.

ಸಮುದಾಯದ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ಈ ಶಾಲೆಯ ಅಭಿವೃದ್ಧಿ ನಿಜಕ್ಕೂ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರೇರಣೆಯಾಗಿದೆ. ಇಂತಹ ಶಾಲೆಗಳು ಪ್ರತೀ ಹಳ್ಳಿಗಳಲ್ಲಿ ಸಿಗುವಂತೆ ಸಮುದಾಯಗಳು ಪ್ರಯತ್ನಿಸಬೇಕು ಎಂದು ನಿಯೋಗದಲ್ಲಿದ್ದ ನಿಡಗುಂದಿ ಸರಕಾರಿ ಶಾಲೆಯ  ಶಿಕ್ಷಕ ಹಾಗೂ ಸಾಹಿತಿ ವೀರಣ್ಣ ಮಡಿವಾಳರ ಹೇಳಿದರು.

ಶಿಕ್ಷಕರ ಇಚ್ಛಾಶಕ್ತಿ ಹಾಗೂ ಸಮುದಾಯದ ಸಹಭಾಗಿತ್ವದ ಮೂಲಕ ಮಾತ್ರ ಸರಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎನ್ನುವುದಕ್ಕೆ ಕುನ್ನಾಳ ಶಾಲೆ ಉತ್ತಮ ಉದಾಹರಣೆ. ರಾಷ್ಟ್ರ‌ಮಟ್ಟದ ಬಾಲಕಿಯರ ಖೋ ಖೋ ಸ್ಪರ್ಧೆಯಲ್ಲಿ ತಾವು ಕೆಲಸ ನಿರ್ವಹಿಸುವ ಮಾವಿನಹೊಂಡ ಹಾಗೂ ಕುನ್ನಾಳ ಶಾಲೆಯ ವಿದ್ಯಾರ್ಥಿಗಳು ಜೊತೆಯಾಗಿ ಭಾಗವಹಿಸಿದ್ದು ಹೆಮ್ಮೆಯ ವಿಷಯ ಎಂದು ಶಿಕ್ಷಕ‌ ಶ್ರೀಕಾಂತ ಅರಹುಣಸಿ ಹೇಳಿದರು.

ಶಾಲೆಯಲ್ಲಿ ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಷನ್ ಇವರ ಪ್ರಾಯೋಜಕತ್ವದ ಆಂಗ್ಲ‌ಭಾಷಾ ಪ್ರಯೋಗಾಲಯ, ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ನಿರ್ಮಿಸಿದ ಗೂಗಲ್ ಡಿಜಿಲ್ಯಾಬ್, ದಿ‌. ನಿಂಗಪ್ಪ ವರಗನ್ನವರ ಸ್ಮರಣಾರ್ಥ ನಿರ್ಮಿಸಿರುವ ಜ್ಞಾನ‌ದೀವಿಗೆ ಗ್ರಂಥಾಲಯ, ಹೈಟೆಕ್ ನಲಿ ಕಲಿ ತರಗತಿಗಳು, ದಾಲ್ಮಿಯಾ ಭಾರತ ಫೌಂಡೇಶನ್ ಇವರ ಶುದ್ದ ಕುಡಿಯುವ ನೀರಿನ ಘಟಕ, ನರೇಗಾ ಯೋಜನೆಯ ಕಾರ್ಯಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ನಿಯೋಗದಲ್ಲಿ ಬೆಂಡವಾಡ ಸಿ.ಆರ್.ಪಿ ಮೋಹನ ರಾಜಮಾನೆ, ಚಿಂಚಲಿ ಪಂಪ ತೋಟ ಶಾಲೆಯ ಶಿಕ್ಷಕ ರಾಜು ಕಾಂಬಳೆ, ಮುಖ್ಯ ಶಿಕ್ಷಕ ಬಿ ಬಿ ಹಾಲೊಳ್ಳಿ, ಎಫ್ ಎನ್ ಕುರಬೇಟ, ಎಸ್ ಎ ಕಳ್ಳಿ, ವಿ ಆರ್ ಅಣ್ಣಿಗೇರಿ,  ಕೆ ಬಿ ಮಾಳಪ್ಪನವರ, ಸಂಗಮೇಶ ಸೊಗಲದ, ಕೃಷ್ಣಾ ಮಳಲಿ, ಉಮೇಶ್ವರ ಮರಗಾಲ, ಭಾರತಿ ಸಿದ್ನಾಳ, ಅನ್ನಪೂರ್ಣ ಸಕ್ರೆಪ್ಪಗೋಳ ಉಪಸ್ಥಿತರಿದ್ದರು.

Comments

Popular posts from this blog

ವಿಜ್ಞಾ‌ನ ವಸ್ತು ಪ್ರದರ್ಶನ

ಕುನ್ನಾಳ ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಮುದಾಯವೇ ಸರಕಾರಿ ಶಾಲೆಗಳ ಶಕ್ತಿ