ಎಲ್ಲ ಮಕ್ಕಳ ಆಸಕ್ತಿಗಳು ಭಿನ್ನ


ಎಲ್ಲ ಮಕ್ಕಳೂ ಅವಳಂತಿದ್ದರೆ/ಅವನಂತಿದ್ದರೆ....

ಇದು ಪ್ರತೀ ಶಿಕ್ಷಕರೂ ಆಡುವ ಮಾತು, ಆದರೆ ವಾಸ್ತವ ಹಾಗಿರಲೂ ಸಾಧ್ಯವೇ ಇಲ್ಲ. ಎಲ್ಲಾ ರೀತಿಯ ಪ್ರಯತ್ನಗಳ ನಂತರವೂ ಕೆಲವು ಮಕ್ಕಳು ನಮ್ಮ ನಿರೀಕ್ಷೆಗಳನ್ನು ಪೂರೈಸಿರುವುದಿಲ್ಲ. ಎಲ್ಲ ಮಕ್ಕಳ ಕುರಿತಾಗಿ ಒಂದೇ ರೀತಿಯ ನಿರೀಕ್ಷೆ ಇಡುವುದು ಕೂಡ ಸರಿಯಲ್ಲ ಎಂದು ಗೊತ್ತಿದ್ದರೂ ನಾವು ಮತ್ತೂ ಹಾಗೇ ಆಲೋಚಿಸುತ್ತೇವೆ. ಪಾಲಕರೂ ಕೂಡ.

ತರಗತಿಯಲಿ ಸುಮ್ಮನೆ ಕೂಡುವ ಒಂದು ಮಗು, ಚಟುವಟಿಕೆ ಎಂದಾಕ್ಷಣ ಮುಖವನ್ನರಳಿಸಿ ಆಸಕ್ತಿಯಿಂದ ಭಾಗವಹಿಸಲು ಚಡಪಡಿಸುತ್ತಾನೆ. ಅದು ಅವನ ಆಸಕ್ತಿ, ಆಸಕ್ತಿಯುದ್ದರೆ ಮಕ್ಕಳೇನೆಲ್ಲವನ್ನು ಮಾಡಬಲ್ಲರು. ಅದಿಲ್ಲದಿದ್ದರೆ ಏನೂ ಸಾಧ್ಯವಿಲ್ಲ. ಭಿನ್ನ ಚಟುವಟಿಕೆಗಳ ಮೂಲಕ ಅವರವರ ಆಸಕ್ತಿಯನ್ನು ಅರಿತಾಗ ಮಾತ್ರ ಅವರ ಕಲಿಕೆಯನ್ನು ಫಲಪ್ರದವಾಗಿಸಲು ಸಾಧ್ಯ. ಎಲ್ಲ ಮಕ್ಕಳ ಆಸಕ್ತಿಗಳು ಒಂದೇ ಆಗಿರುವುದಿಲ್ಲ, ಹಾಗಾಗಿ ಒಂದೇ ರೀತಿಯ ಬೋಧನೆಯ ಸಾಕಾಗುವುದಿಲ್ಲ. ಇದೆಲ್ಲವನ್ನೂ ಅರಿಯದೇ ಹೋದರೆ ಯಶಸ್ಸು ಸಾಧ್ಯವೂ ಇಲ್ಲ.

ಪ್ರತೀ ಶಿಕ್ಷಕನೂ ಏನೂ ನಿರೀಕ್ಷಿಸಿದೇ ತನ್ನ ಉತ್ಕೃಷ್ಟ ಪ್ರಯತ್ನವನ್ನು ಮಾಡಲೇಬೇಕಾದ ಅನಿವಾರ್ಯತೆಯಲ್ಲಿದ್ದಾನೆ. ಒಂದು ಮಗು ವರ್ಷಾಂತ್ಯಕ್ಕೆ ಹೀಗೆಯೇ ಆಗಬೇಕು ಎಂದುಕೊಳ್ಳುವುದಕ್ಕಿಂತ, ಓರ್ವ ಶಿಕ್ಷಕನಾಗಿ ನಾನು ತರಗತಿಗಳಲ್ಲಿ ಈ ರೀತಿಯ ಎಲ್ಲ ಚಟುವಟಿಕೆಗಳನ್ನು ಮಾಡಬೇಕು ಎಂದು ಸಂಕಲ್ಪಿಸಿ ಸುಮ್ಮನೆ ಮಾಡಿದರೆ ಸಾಕು ಪಲಿತಾಂಶ ತಾನೇ ಪ್ರತಿಫಲಿಸಿರುತ್ತದೆ. ಅದರಲ್ಲೂ ಪ್ರಾಥಮಿಕ ಹಂತದ ವಿದ್ಯಾರ್ಥಿಗಳು ಶಿಕ್ಷಕರಿಂದ ಬಯಸುವುದು ಸಂತಸದಾಯಕ, ಭಾರವೆನಿಸದ ಕಲಿಕೆಯನ್ನು, ಒತ್ತಡವಿಲ್ಲದ ತರಗತಿಗಳನ್ನು ಎನ್ನುವುದು ಸ್ಪಷ್ಟ.

ಹೀಗಾಗಿ ನಿರೀಕ್ಷಿತ ಬದಲಾವಣೆ, ಪಲಿತಾಂಶ ಬರುತ್ತಿಲ್ಲ ಎಂದು ಭರವಸೆ ಕಳೆದುಕೊಳ್ಳುವುದು ಬೇಡ. ಸುಮ್ಮನೆ ಮಾಡುವ ನಿರಂತರ ಹಾಗೂ ಸಾಮೂಹಿಕ ಪ್ರಯತ್ನಗಳು ಖಂಡಿತವಾಗಿಯೂ ಉತ್ತಮ ಪಲಿತಾಂಶವನ್ನು ನೀಡುತ್ತವೆ. ಇತರರ ಮಾತುಗಳು, ಅನಿಸಿಕೆಗಳು ನಿಮ್ಮ ಫಲಿತಾಂಶವನ್ನು ಅಳೆಯುವ ಮಾನದಂಡವಾಗದಿರಲಿ. ಸಕಾರಾತ್ಮಕ ಆಲೋಚನೆಯ, ಬದ್ದತೆಯ ತಂಡ ಕಾರ್ಯ ಎಲ್ಲವನ್ನೂ ‌ಬದಲಿಸುವ ಶಕ್ತಿ ಹೊಂದಿದೆ ಎನ್ನುವ ನಂಬಿಕೆ ಇದ್ದರೆ ಸಾಕು, ಎಲ್ಲವೂ ಬದಲಾದೀತು.

#chasingdreams #ShapingFutures #ಬದಲಾಗೋಣ #ಬದಲಿಸೋಣ #ನಾವಿದ್ದಂತೆಬದುಕು

Comments

Popular posts from this blog

ವಿಜ್ಞಾ‌ನ ವಸ್ತು ಪ್ರದರ್ಶನ

ಕುನ್ನಾಳ ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಮುದಾಯವೇ ಸರಕಾರಿ ಶಾಲೆಗಳ ಶಕ್ತಿ